November 17, 2010

ಹುಡುಕಾಟ

ಕಾಡುತ್ತಿವೆ ಪ್ರಶ್ನೆಗಳು ನನ್ನನೆ
ಕೂತಿರುವೆ ಉತ್ತರ ಕಾಣದೆ ಸುಮ್ಮನೆ,

ತುದಿಬುಡವಿಲ್ಲದ ಯೋಚನಾ ಲಹರಿ
ಮನ ಕಲಕುತಿದೆ ಪರಿ ಪರಿ,


ನೆನಪೋ ಯೋಚನೆಯೂ ನಾಕಾಣೆ
ಆದರೂ ಕಲಕುತಿದೆ, ಮೀಟುತಿದೆ ಹೃದಯ ವೀಣೆ,

ಮೂರ್ತ ಅಮೂರ್ತ ಭಾವಗಳ ತಾಕಲಾಟ
ಮನದ ತುಂಬಾ ನೂರು ಮುಖದ ಬಯಲಾಟ,

ಯೋಚನೆಗೆ ಅರ್ಥವಿದೆಯೋ, ಶಕ್ತಿಯಿದೆಯೋ
ಎಂಬ ತೊಳಲಾಟ,

ಓಡುತಿದೆ ಓಡುತಿದೆ ಮನ
ಹೊಸದೇನೋ ಅರಸುತ್ತ.

ಅಲ್ಲದ್ದನ್ನು ಇಲ್ಲದ್ದನ್ನು ಮರೆಯುವ ಭಾವ
ಅಲ್ಲಿದ್ದುದನ್ನು ಪಡೆವ ಭಾವ ಹಂಬಲದ ಭಾವ
ನಾಳೆಯಾದರೂ ಬರುತ್ತಾ..?


( ಫೋಟೋ: ನಾಗರಾಜ ಭಟ್ )
Related Posts Plugin for WordPress, Blogger...