November 20, 2010

ದೂರ ತೀರದ ದಾರಿ


ನಡೆದಷ್ಟೂ  ಸವೆಯುತ್ತಿದೆ  ದಾರಿ
ಇನ್ನೆಷ್ಟು ಹೊತ್ತು ಈ ಪಯಣ  
  


 
ಮೈ ಮನಗಳ ತುಂಬಾ 
ಹೊರಲಾರದ ಭಾರ ಹೊತ್ತು ..


ತುದಿಯೆಲ್ಲೋ ಮೊದಲೆಲ್ಲೋ
ಗುರಿ ಸೇರುವುದೊಂದೇ ಗುರಿ..



ಕಲ್ಲು ಕರಗಿದೆ
ಹೆಜ್ಜೆ ಹಾಕಿ ಹಾಕಿ
ಕಾಲೂ ಕರಗಿರಬಹುದು.. 


ಇದೋ ಬಂದುಬಿಟ್ಟಿತು ನನ್ನ ಮನೆ 
ನನಗೆಂದೇ ಕಾಯುವವರಿದ್ದಾರೆ ಅಲ್ಲಿ
                                                              nabdehlli@gmail.com,
                                                              nagaraj bhat dehalli

November 17, 2010

ಹುಡುಕಾಟ

ಕಾಡುತ್ತಿವೆ ಪ್ರಶ್ನೆಗಳು ನನ್ನನೆ
ಕೂತಿರುವೆ ಉತ್ತರ ಕಾಣದೆ ಸುಮ್ಮನೆ,

ತುದಿಬುಡವಿಲ್ಲದ ಯೋಚನಾ ಲಹರಿ
ಮನ ಕಲಕುತಿದೆ ಪರಿ ಪರಿ,


ನೆನಪೋ ಯೋಚನೆಯೂ ನಾಕಾಣೆ
ಆದರೂ ಕಲಕುತಿದೆ, ಮೀಟುತಿದೆ ಹೃದಯ ವೀಣೆ,

ಮೂರ್ತ ಅಮೂರ್ತ ಭಾವಗಳ ತಾಕಲಾಟ
ಮನದ ತುಂಬಾ ನೂರು ಮುಖದ ಬಯಲಾಟ,

ಯೋಚನೆಗೆ ಅರ್ಥವಿದೆಯೋ, ಶಕ್ತಿಯಿದೆಯೋ
ಎಂಬ ತೊಳಲಾಟ,

ಓಡುತಿದೆ ಓಡುತಿದೆ ಮನ
ಹೊಸದೇನೋ ಅರಸುತ್ತ.

ಅಲ್ಲದ್ದನ್ನು ಇಲ್ಲದ್ದನ್ನು ಮರೆಯುವ ಭಾವ
ಅಲ್ಲಿದ್ದುದನ್ನು ಪಡೆವ ಭಾವ ಹಂಬಲದ ಭಾವ
ನಾಳೆಯಾದರೂ ಬರುತ್ತಾ..?


( ಫೋಟೋ: ನಾಗರಾಜ ಭಟ್ )

November 15, 2010

ಒಂದು ಮುತ್ತಿನ ಕಥೆ

 ದಾರಕ್ಕೆ ಮುತ್ತು ಪೋಣಿಸಿದಂತೆ ಮಳೆಹನಿ

ಹೂವು ಅರಳುವ ಮಂಚೆ ಗಿಡದ ತುಂಬೆಲ್ಲ ಮೊಗ್ಗು ಮುತ್ತಾಗಿ..

ಕೆಸುವಿನೆಲೆಯಲ್ಲಿ ನಿಂತ,ನೀರು ಮುತ್ತಾಗಿ..

November 5, 2010

ದೀಪದಿಂದ ದೀಪವ ಹಚ್ಚಬೇಕು ಮಾನವ..

ಮ್ಮ ಮನದ ತಮಸ್ಸನ್ನು ಅಳಿಸುತ್ತ ಅರಿವಿನತ್ತ ನಮ್ಮನ್ನು ಒಯ್ಯುವ ಬೆಳಕು ಒಂದು ದಿವ್ಯ , ಅದಕ್ಕೆ ಎಲ್ಲವನ್ನೂ ಒಳಗೊಳ್ಳುವ ಶಕ್ತಿ ಇದೆ, ನಮ್ಮ ಗುರಿಗಳತ್ತ ನಮ್ಮನ್ನು ನಡೆಸುವ ಶಕ್ತಿ ಇದೆ. ತಾನು ಉರಿದು ಜಗದ ಕತ್ತಲೆ ಕಳೆಯುವ ಹಣತೆಯನ್ನು ನಮ್ಮೆಲ್ಲರ ಬಾಳಿಗೆ ಸ್ಪೂರ್ತಿಯಾಗಿಸಿಕೊಳ್ಳುತ್ತ ಬೆಳಕಿನ ಜಗತ್ತನ್ನು ನಮ್ಮದಾಗಿಸಿಕೊಳ್ಳುವ...  










                                                              Happy diwali

October 22, 2010

ಹೂವೂ.. ಚೆಲುವೆಲ್ಲಾ ತಂದೆಂದಿತು...











                                                          beautiful flowers

ಗೊಂಬೆಗಳ ಜೊತೆಗೆ

ಮ್ಮ ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು ,ಇಂಥ ಸಂಸ್ಕೃತಿಯ ಒಂದು ಭಾಗ ಗೊಂಬೆ ಹಬ್ಬ{ನವರಾತ್ರಿ}.ಅಧುನಿಕತೆಯೆದುರಿಗಿನ ಹೋರಾಟದಲ್ಲಿ ಇಂದಿಗೂ ತನ್ನತನವನ್ನುಳಿಸಿಕೊಂಡಿರುವ ಹಬ್ಬ ಸಂತಸದ ಆಗರ, ಭಾವನೆಗಳ ಸಾಗರಗೊಂಬೆಗಳು ಮನುಷ್ಯರಂತೆ ಮಾತನಾಡದಿದ್ದರೂ ಅವ್ಯಕ್ತ ಭಾವನೆಗಳ ಮೂಲಕ  ನಮ್ಮೊಂದಿಗೆ  ಸ್ಪಂದಿಸಬಲ್ಲವು. ನಮ್ಮೆಲ್ಲರೊಂದಿಗೆ ತವಕ ತಲ್ಲಣ, ಸಡಗರ ಸಂಭ್ರಮ,ನೋವು ನಲಿವುಗಳಲ್ಲಿ ಭಾಗಿಯಾಗಬಲ್ಲವು. ಅಂತಹುದೊಂದು ಚಿಕ್ಕ ಸಂಭ್ರಮ ಇಲ್ಲಿದೆ ನೋಡಿ..... 

ಎಲ್ಲೆಲ್ಲೂ ಗೊಂಬೆಗಳು
 
||  ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ||

ನಾನೂ ನೀನೂ ಜೋಡಿ..  

ನಿನ್ನಂದಕೆ ಸಾಟಿಯೆಲ್ಲಿ ?

ಸಕ್ಕರೆ ಗೊಂಬೆ

ಫಾರಿನ್ ಗೊಂಬೆ

ದೇವದಾಸ್ ಗೊಂಬೆ
 
ನಮ್ಮ ಸಂಸಾರ ಆನಂದ ಸಾಗರ

ನವಿಲು ಮುಖದ  ದೀಪ  


ಹೊಳೆವ ಕಂಗಳ ಮೋಡಿ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು.....
                   
ರಾಷ್ಟ್ರಪಿತನಿಗೆ ನಮನ
                                                                   dussara gombegalu

October 18, 2010

ಹೂವೊಂದು ಬಳಿ ಬಂದು...

ಲಾಲಬಾಗ್ ಪ್ಲವರ್ ಷೋನಲ್ಲಿ ಕ್ಲಿಕ್ಕಿಸಿದ ಚಿತ್ರಗಳು









                                                                beautiful flowers


Related Posts Plugin for WordPress, Blogger...