ಗೊತ್ತುಗುರಿಯಿಲ್ಲದೆ ಅಲೆಯತೊಡಗುತ್ತವೆ,ಅವುಗಳದೇ ರೀತಿಯಲ್ಲಿ..
ಚಿಕ್ಕವನಿದ್ದಾಗ ಶಾಲೆಯ ಗೆಳತಿಯೊಬ್ಬಳು ತೋರಿಸಿದ್ದ ಮೂರುಗಾಜಿನ ಪುಟ್ಟ ಕಲೈಡೋಸ್ಕೋಪೊಂದು ನನ್ನ ಮನದೊಳಗೆ ಅಚ್ಚಾಗಿ ಕೂತಿದೆ, ಉಳಿದಿದೆ ಶಾಶ್ವತವಾಗಿ. ನೂರು ಬಣ್ಣಗಳ ಕನಸಿನ ಸಾಧ್ಯತೆಗಳನ್ನು ತೋರಿಸುತ್ತ ನಡೆಸಿದೆ.
ಈ ಜಗದ ಕಣ್ಣಾಮುಚ್ಚಾಲೆಗಳ ನಡುವೆಯೂ, ನನ್ನ "ರೈಲ್ವೆ ಸ್ಟೇಷನ್ನಿನಲ್ಲಿ ಕಾಯುತ್ತಿರುವಂತಿರುವ" ಅಭದ್ರ ತಲ್ಲಣಗಳನ್ನು ಕಾಯುತ್ತ, ಸಂತಯಿಸುತ್ತ ದೀಪಶಿಖೆಯಂತೆ ಕೈ ಹಿಡಿದು ನಡೆಸುತ್ತಿದೆ.
ಕೇಳಿದ್ದೇನೆ ಅದನ್ನು: "ಹೇಗೆ ತೋರಿಸುತ್ತಿಯೇ ಈ ಎಲ್ಲ ವಿನ್ಯಾಸಗಳನ್ನು?"
ಅದು ಹೇಳುತ್ತದೆ: "ನನ್ನ ಹಾಗೆ ನಿನ್ನ ಒಳಗನ್ನು ಬೆಳಕಿಗೆ ಬಿಚ್ಚಿಡು"
ಹಾಗೆ ಬಿಚ್ಚಿಟ್ಟಾಗ ತೋರುತ್ತದೆ- ಒಳಗು ಒಳಗಿನ ಒಳಗು.. ಹೊರಗಿನ ಒಳಗು, ಅದರ ವಿನ್ಯಾಸ, ಜೀವಗಳನು ಹಿಡಿದಿಟ್ಟ ನೂಲಿನ ಎಳೆ,
ಆ ವರ್ತಿ ಯನ್ನು ಹಿಡಿದಿಡುವ ದೀಪ, ಗುಬ್ಬಿಗೂಡು, ಮಂಜಿನ ಹನಿ, ಪುಟ್ಟ ಶಾಲೆಯ ಮಕ್ಕಳ ಕಲರವ..