November 5, 2020

touch me not - sensitive plant leaves in action video, ಮುಟ್ಟಿದರೆ ಮುನಿ ಸಸ್ಯ

touch me not - sensitive plant leaves in action video, ಮುಟ್ಟಿದರೆ ಮುನಿ ಸಸ್ಯ

touch me not - sensitive plant leaves in action video, ಮುಟ್ಟಿದರೆ ಮುನಿ ಸಸ್ಯ

touch me not - sensitive plant leaves in action video, ಮುಟ್ಟಿದರೆ ಮುನಿ ಸಸ್ಯ Mimosa pudica is a creeping annual or perennial flowering plant of the pea/legume family Fabaceae and Magnoliopsida taxon, often grown for its curiosity value: the compound leaves fold inward and droop when touched or shaken, defending themselves from harm, and re-open a few minutes later. Wikipedia: https://en.m.wikipedia.org/wiki/Mimosa_pudica ಕನ್ನಡ ವಿಕಿಪೀಡಿಯ: https://kn.m.wikipedia.org/wiki/%E0%B2%AE%E0%B3%81%E0%B2%9F%E0%B3%8D%E0%B2%9F%E0%B2%BF%E0%B2%A6%E0%B2%B0%E0%B3%86_%E0%B2%AE%E0%B3%81%E0%B2%A8%E0%B2%BF_(Touch_me_not) ಆಡುಭಾಷೆಯಲ್ಲಿ ನಾಚಿಗೆ ಮುಳ್ಳು,ಲಜ್ಜೆ ಮುಳ್ಳು,ಮುಟ್ಟಿದರೆ ಮುಚಕ,ಮುಚ್ಗನ್ ಮುಳ್ಳು,ಪತಿವ್ರತೆ,ಮುಟ್ಟಿದರೆ ಮುನಿ,ಲಜ್ಜಾವತಿ,ಸಂಸ್ಕೃತದಲ್ಲಿ "ಅಂಜಲೀ ಕಾರಿಕೆ" ಆಂಗ್ಲದಲ್ಲಿ ಟಚ್ ಮಿ ನಾಟ್, ಹಿಂದಿಯಲ್ಲಿ ಚುಯ್ ಮುಯ್, ಸಸ್ಯಶಾಸ್ತ್ರೀಯ ಹೆಸರು ‘ಮಿಮೊಸ ಪುಡಿಕಾ’ಎಂದೆಲ್ಲಾ ಕರೆಸಿಕೊಂಡು ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಉತ್ತಮ ಔಷಧೀಯ ಗುಣವಿದೆ.ಇದರ ಮೂಲ ದಕ್ಷಿಣ ಹಾಗೂ ಮಧ್ಯ ಅಮೆರಿಕ. ಮೈತುಂಬ ಮುಳ್ಳು, ಎಲೆಗಳನ್ನು ಮುಟ್ಟಿದೊಡನೆ ಮುದುಡಿಕೊಳ್ಳುತ್ತದೆ ಸ್ಪರ್ಶ ತಾಕಿದೊಡನೆ ನಾಚಿ ಕೆಂಪಾಗಿ, ಮುಸುಕು ಹೊದ್ದು ಕುಳಿತಂತೆ ಭಾಸವಾಗುತ್ತದೆ.ಇದೊಂದು ಪ್ರಕೃತಿಯ ರಹಸ್ಯವಾಗಿದ್ದು ಸಸ್ಯವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಳವಡಿಸಿಕೊಂಡಿರುವ ತಂತ್ರವಿದು. ಈ ಸಸ್ಯವು ಹಸಿರು ಹುಲ್ಲು ಮೇಯುವ ಪ್ರಾಣಿಗಳಿಗೆ ಉತ್ತಮ ಆಹಾರವಾಗಿದ್ದು, ಹಸಿರಿನಿಂದ ಕಂಗೊಳಿಸುವ ಈ ಸಸ್ಯವನ್ನು ನೋಡಿದಾಕ್ಷಣ ಮೇಯಲು ಧಾವಿಸುತ್ತವೆ. ಆಗ ತನ್ನನ್ನು ರಕ್ಷಿಸಿಕೊಳ್ಳಲು ಮುದುರಲು ಆರಂಭಿಸಿದ ತಕ್ಷಣ ಒಂದಕ್ಕೊಂದು ತಗುಲುತ್ತಾ ಹೋಗಿ ಕ್ಷಣ ಮಾತ್ರದಲ್ಲಿ ವಿಶಾಲ ಪ್ರದೇಶದಲ್ಲಿ ಹರಡಿದ ಈ ಸಸ್ಯ ಮುದುಡಿಕೊಳ್ಳುತ್ತದೆ. ಇದರಿಂದ ಮೇಯುವ ಪ್ರಾಣಿಗಳಿಗೆ ಅಲ್ಲಿ ಕೇವಲ ಒಣಗಿದ ಸಸ್ಯಗಳಂತೆ ಕಂಡುಬರುತ್ತದೆ. ಇದರಿಂದ ಪ್ರಾಣಿಗಳು ಬೇರೆಡೆಗೆ ಹೋಗುತ್ತವೆ. ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾದಿ(Piles) ಗುಣಮುಖವಾಗುತ್ತದೆ.ಮೂತ್ರ ಕೋಶದ ಕಲ್ಲು ನಿವಾರಣೆಯಲ್ಲಿ, ಮಹಿಳೆಯರ ಋತುಚಕ್ರ ಸರಾಗವಾಗಿ ಆಗುವಲ್ಲಿ, ಮೂಲವ್ಯಾಧಿ ಹಾಗೂ ಹಲ್ಲು ನೋವಿನ ನಿವಾರಣೆಯಲ್ಲಿ ಈ ಸಸ್ಯದ ಪಾತ್ರ ದೊಡ್ಡದು.ಈ ಗಿಡದಲ್ಲಿ ಬಹಳಷ್ಟು ಔಷಧೀಯ ಗುಣವಿದೆ. ಈ ಸಸ್ಯದ ಎಲೆ, ಹೂವು, ಕಾಂಡ ಹಾಗೂ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ. #nature #touchmenot #ಮುಟ್ಟಿದರೆಮುನಿ

No comments:

Related Posts Plugin for WordPress, Blogger...